ವಿವೇಕಾನಂದ ಹಳ್ಳೆಕೆರೆ

ಬೆಂಗಳೂರು | ನವೋದ್ಯಮ

ಸಂಪರ್ಕ ಕ್ರಾಂತಿಗೆ ‘ಬೌನ್ಸ್‌’ ಜೋಶ್‌

 

 

ಬೆಂಗಳೂರಿನಲ್ಲಿ ನಿಮಗೆ ಎಲ್ಲೆಡೆ ಹಳದಿ- ಕೆಂಪು ಬಣ್ಣದ 'ಬೌನ್ಸ್' ಬೈಕುಗಳು ಕಾಣುತ್ತವೆ. ಕರ್ನಾಟಕ ಧ್ವಜದ ಬಣ್ಣಗಳನ್ನು ಪ್ರತಿನಿಧಿಸುವ ಈ ಬೈಕ್ ಗಳು ಕನ್ನಡದ ಹುಡುಗರ ಸಾಧನೆಯ ಸಂಕೇತವೂ ಹೌದು. ಈ ಬೈಕ್ ಗಳ ಹಿಂದಿನ ಚಾಲನಾ ಶಕ್ತಿ ವಿವೇಕಾನಂದ ಹಳ್ಳೆಕೆರೆ. ಹಾಸನದ ವಿವೇಕಾನಂದ, ಬೆಂಗಳೂರಿನ ಅರುಣ್ ಗಿರಿ ಮತ್ತು ವರುಣ್ ಅಗ್ನಿ ಜೊತೆಗೂಡಿ ಈ 'ಬೌನ್ಸ್' ನವೋದ್ಯಮ ಸ್ಥಾಪಿಸಿದ್ದಾರೆ.

 

ಮಹಾನಗರಗಳಲ್ಲಿ ‘ಷೇರ್ ಮೊಬಿಲಿಟಿ’ ಪರಿಕಲ್ಪನೆ ಸಾಕಾರಗೊಳಿಸಿ, ವಾಹನ ದಟ್ಟಣೆ ಕಡಿಮೆ ಮಾಡುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಬೌನ್ಸ್. ಕೀ ರಹಿತ (Key Less) ತಂತ್ರಜ್ಞಾನದ ನೆರವಿನಿಂದ ಸ್ಕೂಟರ್‌ಗಳನ್ನು ಬಾಡಿಗೆ ನೀಡುವುದನ್ನು ಸುಲಭವಾಗಿ ನಿರ್ವಹಿಸಬಹುದು ಎನ್ನುವುದನ್ನು ತೋರಿಸಿರುವ‌ ವಿವೇಕ್ ಮತ್ತು ತಂಡ, ವಿಶ್ವದಲ್ಲೇ ಮೊದಲ ಬಾರಿಗೆ ಈ ಮಾದರಿಯನ್ನು ಕಾರ್ಯರೂಪಕ್ಕೆ ತಂದ ಹೆಗ್ಗಳಿಕೆ ಹೊಂದಿದೆ.

 

ಸಿಎ ಮಾಡಿರುವ ವಿವೇಕಾನಂದ (ವಿವೇಕ್) ಸದ್ಯ ಬೌನ್ಸ್ ನ ಸಿಇಒ ಆಗಿದ್ದಾರೆ. ಆಹಾರ, ಬಟ್ಟೆ, ವಸತಿಯಂತೆ ಸುಲಭ ಸಾರಿಗೆ ವ್ಯವಸ್ಥೆಯೂ ಮನುಷ್ಯನ ಅಗತ್ಯಗಳಲ್ಲಿ ಒಂದು ಎಂದು ನಂಬಿರುವ ಅವರು, ಬೌನ್ಸ್ ಮೂಲಕ ಈ ನಂಬಿಕೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ. 2014ರಲ್ಲಿ ಎಂಟು ಬೈಕ್ ಗಳೊಂದಿಗೆ 'ವಿಕೆಂಡ್ ರೈಡ್' ಹೆಸರಿನಲ್ಲಿ ಸಣ್ಣದಾಗಿ ಪ್ರಾರಂಭ 'ಷೇರ್ ಮೊಬಿಲಿಟಿ' ಸೇವೆ ಪ್ರಾರಂಭಿಸಿದ ಅವರು, ಇದಕ್ಕೆ ಸಿಕ್ಕ ಸ್ಪಂದನೆ ಮತ್ತು ಬೇಡಿಕೆ ಮನಗಂಡು 2016ರಲ್ಲಿ ಬೌನ್ಸ್ ಪ್ರಾರಂಭಿಸಿದರು.

 

ಕಂಪನಿಯ ವ್ಯಾಪಾರ ಅಭಿವೃದ್ಧಿ, ಮಾರ್ಕೆಟಿಂಗ್ ವಿಭಾಗದ ಜವಾಬ್ದಾರಿಯೂ‌ ವಿವೇಕ್ ಮೇಲಿದೆ. ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ, ಕಂಪನಿಗೆ ಹೂಡಿಕೆದಾರರನ್ನು ಸೆಳೆಯುವ ಚಾಣಾಕ್ಷತನವೂ ಅವರಲ್ಲಿದೆ. ಕನ್ನಡದ ಹುಡುಗರು ಮನಸು ಮಾಡಿದರೆ ವ್ಯವಸ್ಥೆಯಲ್ಲಿ ಹೊಸತನ ಹೇಗೆ ತರಬಹುದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿ ನಿಂತಿದ್ದಾರೆ ವಿವೇಕಾನಂದ ಹಳ್ಳೆಕೆರೆ

 

- ಗುರು ಪಿ.ಎಸ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು