ಸುಬ್ರಹ್ಮಣ್ಯ ಸಿ

ಮಂಗಳೂರು | ಸಾಹಿತ್ಯ

ಸಾಹಿತ್ಯ ಜೀವಪರತೆ; ಕನ್ನಡ ನಾಡು, ನುಡಿಯ ಚಿಂತನೆಯನ್ನು ಜನಮುಖಿಯಾಗಿಸುವತ್ತ

 

ದೇಸೀಯ ಮೀಮಾಂಸೆಯನ್ನು ಆಧುನಿಕ ಅಭಿವ್ಯಕ್ತಿಯಾಗಿ ಕತೆ, ಲೇಖನ, ಸಂಶೋಧನೆ ಮೂಲಕ ಪ್ರಸ್ತುತ ಪಡಿಸುತ್ತಿರುವವರು ಯುವ ಬರಹಗಾರ ಸುಬ್ರಹ್ಮಣ್ಯ ಸಿ.

 

ಅವರು, ಚಿಕ್ಕಮಗಳೂರಿನ ಕೊಪ್ಪದ ಹೇರೂರಿನ ಚಿನ್ನಯ್ಯ ಮತ್ತು ಸುಶೀಲ ದಂಪತಿ ಪುತ್ರ. ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ಪ್ರಸ್ತುತ ಮಂಗಳೂರಿನ ಬಿಜಿಎಸ್ ಕಾಲೇಜಿನಲ್ಲಿ ಉಪಪ್ರಾಂಶುಪಾಲರಾಗಿದ್ದಾರೆ.

 

ಅವರ ಬಾಲ್ಯದ ಆಸಕ್ತಿಗೆ ಹು.ವಾ ಶ್ರೀವತ್ಸರ ಸಾಹಿತ್ಯ ಮಾರ್ಗದರ್ಶನ, ಪ್ರದೀಪ್ ಹೆಗ್ಡೆಯ ಆರ್ಥಿಕ ಬೆಂಬಲ ಸಾಹಿತ್ಯಕ್ಕೆ ಪ್ರೇರಣೆ ನೀಡಿತು. ಆಗಲೇ, ‘ಬಾನಂಗಳ’ ಕವನ ಸಂಕಲನ ಪ್ರಕಟವಾಯಿತು. ಆಗ ಭಾಗಿಯಾದ ಚರ್ಚೆ, ಭಾಷಣ, ನಾಟಕ ಸ್ಪರ್ಧೆಗಳು ಅವರನ್ನು ರೂಪಿಸಿತು. 

 

ಪದವಿಗೆ ಆಳ್ವಾಸ್‍ಗೆ ಸೇರಿಕೊಂಡ ಬಳಿಕ ಡಾ. ಧನಂಜಯ ಕುಂಬ್ಳೆ, ಪ್ರೊ. ಚಂದ್ರಶೇಖರಮಯ್ಯ ಮತ್ತಿತರರು ಪ್ರೇರಣೆ ನೀಡಿದರು. ‘ಪಯಣ’ ಕವನ ಸಂಕಲನ ಮತ್ತು ಅನೇಕ ಉಪನ್ಯಾಸಗಳು ಕನ್ನಡದ ಚಿಂತನೆಯ ಚೌಕಟ್ಟನ್ನು ರೂಪಿಸಿತು.

 

ಕನ್ನಡ ವಿಶ್ವವಿದ್ಯಾಲಯದಲ್ಲಿ ಕತೆಗಾರ ಡಾ. ಅಮರೇಶ ನುಗಡೋಣಿರ ಮಾರ್ಗದರ್ಶನ ಬರವಣಿಗೆಯ ಸಾಧ್ಯತೆಯನ್ನು ವಿಸ್ತರಿಸಿತು.

 

ಆಗ, ‘ಮಲೆಯ ಮಾರುತ’, ‘ಕದಿರು’, ‘ಸಿಂಚನಾ’, ಅನಿಕೇತನ ಕೃತಿಗಳನ್ನು ಪ್ರಕಟಿಸಿದರು. ‘ಹು.ವಾ. ಶ್ರೀವತ್ಸ’ ವ್ಯಕ್ತಿಚಿತ್ರ ಪ್ರಕಟವಾಯಿತು. ವಚನ ಸಾಹಿತ್ಯ, ಸಣ್ಣಕತೆ, ಕಾವ್ಯ, ನಾಡು ನುಡಿಯ ಸಾಂಸ್ಕೃತಿಕ ಚಿಂತನೆ ಕುರಿತು ಬರೆದರು.

 

‘ಜೀವಪರವಾದ ಸಾಹಿತ್ಯ ಮಾದರಿಯನ್ನು ರೂಪಿಸುವುದು, ಕನ್ನಡ ನಾಡು, ನುಡಿಯ ಚಿಂತನೆಯನ್ನು ಜನಮುಖಿಯಾಗಿಸುವುದು’ ತಮ್ಮ ಉದ್ದೇಶ ಎನ್ನುತ್ತಾರೆ ಸುಬ್ರಹ್ಮಣ್ಯ.

- ಹರ್ಷವರ್ಧನ ಪಿ.ಆರ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು