ಶಾರದಾ ಮಾಳಗೆ

ಬೀದರ್ | ಸಮಾಜ ಸೇವೆ

ಅಲೆಮಾರಿ ಮಕ್ಕಳ ‘ಅಮ್ಮ’

 

 

ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬಾಗಲವಾಡ ಗ್ರಾಮದ ಶಾರದಮ್ಮ ಅನಿಲಕುಮಾರ ಮಾಳಗೆ, 2011ರಲ್ಲಿ ಮದುವೆಯಾದ ಬಳಿಕ ಬೀದರ್‌ನಲ್ಲಿ ವಾಸವಿದ್ದಾರೆ. ನೌಬಾದ್‌ನಲ್ಲಿ ಬೀಡು ಬಿಟ್ಟಿದ್ದ ಅಲೆಮಾರಿಗಳ ನೂರಾರು ಕುಟುಂಬಗಳು ಯಾವುದೇ ಸೌಲಭ್ಯವಿಲ್ಲದೇ ದಯನೀಯ ಸ್ಥಿತಿ ಇರುವುದನ್ನು ಕಂಡು ನೆರವಾಗಲು ನಿರ್ಧರಿಸಿದರು. ಅಲ್ಲದೇ, ಆಕಸ್ಮಿಕವಾಗಿ ತೆರೆದಬಾವಿಯಲ್ಲಿ ಬಿದ್ದಿದ್ದ ಮಗುವೊಂದನ್ನು ಸಹ ಅವರು ರಕ್ಷಿಸಿದರು.

 

‘ಬೀದರ್‌ನಲ್ಲಿ ಅಲೆಮಾರಿಗಳೇ ಇಲ್ಲ’ ಎಂದು ವರದಿ ನೀಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಶಾರದಮ್ಮ ಸತ್ಯಾಂಶವನ್ನು ಮನದಟ್ಟು ಮಾಡಿಸಿದರು. ಅಲೆಮಾರಿಗಳ ಅಸ್ತಿತ್ವ ಸಾಬೀತುಪಡಿಸಲು

 

ಅವರ ಹೋರಾಟ ರೂಪಿಸತೊಡಗಿದರು. ಇದನ್ನರಿತ ಅಧಿಕಾರಿಗಳು ಅಲೆಮಾರಿಗಳು ಬೀಡು ಬಿಟ್ಟ ಸ್ಥಳಕ್ಕೆ ಭೇಟಿ ನೀಡಿದರು. ಅವರ ದಾಖಲಾತಿಯ ಜವಾಬ್ದಾರಿಯನ್ನು ಶಾರದಮ್ಮಗೆ ಒಪ್ಪಿಸಿದರು.

 

ಅಲೆಮಾರಿ ಸಮುದಾಯದ 63 ಮಕ್ಕಳನ್ನು ಶಾಲೆಗೆ ದಾಖಲಿಸಿ, ಅಕ್ಷರ ಜ್ಞಾನ ಒದಗಿಸಿದ್ದಾರೆ. ಅಲ್ಲದೆ ಅವರಿಗೆ ಮನೆಪಾಠ ಮಾಡುತ್ತಾರೆ.

 

ಅಲೆಮಾರಿ ಸಮುದಾಯದ 500ಕ್ಕೂ ಹೆಚ್ಚು ಜನರಿಗೆ ಆಧಾರ್, ಪಡಿತರ ಚೀಟಿ, ಜಾತಿ ಪ್ರಮಾಣಪತ್ರ ಕೊಡಿಸುವಲ್ಲಿ ನೆರವಾಗಿದ್ದಾರೆ.

 

ಈ ಸಮುದಾಯದ ಜನರ ಸಂಕಷ್ಟವನ್ನು ಅಧಿಕಾರಿಗಳಿಗೆ ಮನದಟ್ಟುಮಾಡಿಕೊಟ್ಟು ಸರ್ಕಾರಿ ಯೋಜನೆಗಳನ್ನು ಅವರಿಗೆ ತಲುಪಿಸುತ್ತಿದ್ದಾರೆ. ಏಳು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಶಾರದಮ್ಮ.

 

-ಗಣೇಶ ಡಿ. ಚಂದನಶಿವ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು