ಸೇಚನ್ ಬಿ.ಲಕ್ಮೀಕಾಂತ್

ತುಮಕೂರು | ಟೆಕ್ವಾಂಡೊ ಪಟು

ಕ್ರೀಡೆಯ ಭಿನ್ನ ಹಾದಿ ಅರಸಿ...

 


‘ಕಾಲಿನ ಮೂಲಕ ಆಡುವ ಕ್ರೀಡೆಯಲ್ಲಿ ತೊಡಗಬೇಕು ಎಂಬ ಕನಸು ಇತ್ತು. ಫುಟ್‌ಬಾಲ್‌ ಆಡಿದೆ. ಅದಷ್ಟು ಮನಸಿಗೆ ಹಿಡಿಸಲಿಲ್ಲ. ಟೆಕ್ವಾಂಡೊ ಬಗ್ಗೆ ಗೊತ್ತಾಯಿತು. ಎರಡು ವರ್ಷ ನಿರಂತರ ತರಬೇತಿ ಪಡೆದೆ. ಅದು ನನ್ನನ್ನೇ ಆವರಿಸಿತು’ ಎಂದು ತಮ್ಮ ಭಿನ್ನ ಹಾದಿಯನ್ನು ನೆನಪಿಸಿಕೊಂಡರು ಸೇಚನ್‌ ಬಿ.ಲಕ್ಷ್ಮಿಕಾಂತ್‌.

 

ದಕ್ಷಿಣ ಕೊರಿಯಾದ ರಾಷ್ಟ್ರೀಯ ಆಟವನ್ನು ಕಲ್ಪತರು ನಾಡಿನ ಯುವಕ ಆಯ್ದುಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. 4ನೇ ತರಗತಿಯಿಂದಲೇ ಟೆಕ್ವಾಂಡೊ ತರಬೇತಿ ಪಡೆದ ಸೇಚನ್‌ 2012ರಲ್ಲೇ ದಕ್ಷಿಣಕೊರಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ 3ನೇ ಸ್ಥಾನ ಪಡೆದಿದ್ದಾರೆ.

 

ಟೆಕ್ವಾಂಡೊ ಕಾಲು ಹಾಗೂ ಕೈಗಳನ್ನು ಬಳಸಿ ಫೈಟಿಂಗ್‌ ಆಡುವ ಆಟ.

 

ನವದೆಹಲಿಯಲ್ಲಿ ನಡೆದ ಸ್ಪರ್ಧೆ, 6 ರಾಜ್ಯಮಟ್ಟದ ಸ್ಪರ್ಧೆ, ಪಿಯು ಬೋರ್ಡ್‌ನಿಂದ, ಸಿಬಿಎಸ್‌ಸಿಯಿಂದ ನಡೆಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಹೀಗೆ ರಾಜ್ಯದಲ್ಲಿ ಎಲ್ಲಿ ಟೆಕ್ವಾಂಡೊ ಸ್ಪರ್ಧೆ ನಡೆದರೂ ಸೇಚನ್‌ ಅವರ ಹಾಜರಿ ಇದ್ದೇ ಇರುತ್ತದೆ.

 

ತುಮಕೂರಿನ ಲಕ್ಷ್ಮಿಕಾಂತ್‌ ಹಾಗೂ ನಂದಿನಿ ದಂಪತಿಯ ಪುತ್ರ ಸೇಚನ್‌ ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ್ದಾರೆ.

 

‘ಟೆಕ್ವಾಂಡೊ ಒಲಂಪಿಕ್‌ ಕ್ರೀಡೆಯಾಗಿದ್ದು, ಭಾರತದಿಂದ ಇದುವರೆಗೆ ಯಾರೊಬ್ಬರೂ ಸ್ಪರ್ಧಿಸಿಲ್ಲ. ಭಾರತದಿಂದ ಈ ಕ್ರೀಡೆಯಲ್ಲಿ ಸ್ಪರ್ಧಿಸುವ ಮಹದಾಸೆ ಇದೆ’ ಎಂದು ತಮ್ಮ ಗುರಿಯನ್ನು ಬಿಚ್ಚಿಟ್ಟರು ಸೇಚನ್‌.

 

-ಸುಮಾ ಬಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು