ಪ್ರಿಯಾಂಕ ಚಿಂಚೊಳಿ

ಕಲಬುರ್ಗಿ | ಕಿರುತೆರೆ/ಸಿನಿಮಾ

ಬಿಸಿಲ ನಾಡಿನ ಕುವರಿ ಕಿರುತೆರೆಯ ‘ಮಿಂಚು’


 

ಕಲಬುರ್ಗಿ ಜಿಲ್ಲೆಯ ಚಿಂಚೋಳಿಯವರಾದ ಪ್ರಿಯಾಂಕಾ ಮಾಡೆಲ್ ಮತ್ತು ಕಿರುತೆರೆ ನಟಿ. ಎಂ.ಟೆಕ್ ಪದವೀಧರೆಯಾಗಿರುವ ಇವರು ಜೀವನದಲ್ಲಿ ವೈವಿಧ್ಯಮಯ ಮತ್ತು ಆಸಕ್ತಿಕರ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ತಂದೆ ರಾಜೀವ್‌ ಮತ್ತು ತಾಯಿ ಮಮತಾ ಅವರ ಪುತ್ರಿ. ಪಶುಗಳ ಜೀವನಕ್ರಮ, ವೈದ್ಯಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಇವರಿಗೆ ಪಶುವೈದ್ಯೆಯಾಗುವ ಬಯಕೆ ಇತ್ತು. ಆದರೆ ತಾಯಿಯ ಇಚ್ಛೆಯಂತೆ ರೂಪದರ್ಶಿಯಾದರು.

 

ಸುವರ್ಣ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುವ ‘ಹರಹರ ಮಹಾದೇವ’ ಧಾರಾವಾಹಿಯಲ್ಲಿ ‘ಪಾರ್ವತಿ’ ಪ್ರಾತ್ರಧಾರಿಯಾಗಿರುವ ಪ್ರಿಯಾಂಕಾ ಟಿವಿ ವೀಕ್ಷಕರ ಗಮನ ಸೆಳೆದಿದ್ದಾರೆ. ಉದಯ ಟಿವಿಯ ‘ಜೈ ಹನುಮಾನ್‌’ ಧಾರಾವಾಹಿಯಲ್ಲಿ ‘ಅಂಜನಾ ದೇವಿ’ ಮತ್ತು ಇದೇ ಟಿವಿಯಲ್ಲಿ ‘ಅಪ್ಪಾ ಐ ಲವ್‌ ಯು’ ಧಾರಾವಾಹಿಯಲ್ಲಿ ಪಾತ್ರ ನಿಭಾಯಿಸುತ್ತಾರೆ.

 

ಕಿರುತೆರೆ ಪ್ರವೇಶಿಸುವ ಮುನ್ನ ಸಿನಿಮಾ ಕ್ಷೇತ್ರದಲ್ಲೂ ಮಿಂಚಿರುವ ಇವರು ‘ಬಿಲ್‌ ಗೇಟ್ಸ್‌’, ‘ಗಿರಿಗಿಟ್ಲೆ’, ‘ಸಮಯದ ಗೊಂಬೆ’ ಎಂಬ ಸಿನೆಮಾಗಳಲ್ಲೂ ನಟಿಸಿದ್ದಾರೆ. 2011ರಲ್ಲಿ ‘ಮಿಸ್‌ ಗುಲಬರ್ಗಾ’, 2013ರಲ್ಲಿ ‘ಮಿಸ್‌ ವಿವೆಲ್‌ ಸೌತ್‌ ಇಂಡಿಯಾ’, 2014ರಲ್ಲಿ ‘ಮಿಸ್‌ ಕರ್ನಾಟಕ’ ಮತ್ತು ‘2017ರಲ್ಲಿ ವಿವೇಕ್ ಮಿಸ್ ಸೌತ್ ಇಂಡಿಯಾ’ ಸ್ಪರ್ಧೆಗಳಲ್ಲಿ ಮಿಂಚಿದ್ದಾರೆ.

 

ಹೆಸರಾಂತ ಫ್ಯಾಷನ್‌ ಪರಿಣತರಾದ ಶಿಲ್ಪಾ ಚೌಧರಿ ಮತ್ತು ಪ್ರಸಾದ್‌ ಬಿದ್ದಪ್ಪ ಅವರೊಂದಿಗೆ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಮೂರು ವರ್ಷ ರೂಪದರ್ಶಿಯಾಗಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

-ಸಂತೋಷ ಈ. ಚಿನಗುಡಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು