ಪ್ರಶಾಂತ್ ಕುಮಾರ್ ಎ.ಪಿ.

ತುಮಕೂರು | ಶಿಕ್ಷಕ

ತಾಂತ್ರಿಕ ಶಿಕ್ಷಣದ ಮಾಂತ್ರಿಕ ಮೇಷ್ಟ್ರು 

 

 

ದೇಶದ ಯುವಶಕ್ತಿಯನ್ನು ಸಮರ್ಥವಾಗಿ ದುಡಿಸಿಕೊಳ್ಳಬೇಕು. ಯುವಜನರ ಸಾಮರ್ಥ್ಯಕ್ಕೊಂದು ಸ್ಪ‍ಷ್ಟ ಸ್ವರೂಪ ನೀಡಬೇಕೆಂಬ ಹಂಬಲ ಹೊತ್ತ ಮೇಷ್ಟ್ರು ‌ಪ್ರಶಾಂತ್ ಕುಮಾರ್ ಎ.ಪಿ.

 

ವೃತ್ತಿಯಲ್ಲಿ ತಾಂತ್ರಿಕ ಶಿಕ್ಷಣದ ಶಿಕ್ಷಕರಾದದರೂ, ಶಿಕ್ಷಣ ಯಾಂತ್ರಿಕವಾಗಬಾರದು, ಜೀವಪರವಿರಬೇಕು ಎನ್ನುವ ಕಾಳಜಿ ಪ್ರಶಾಂತ್‌ ಅವರದ್ದು. 12 ವರ್ಷಗಳಿಂದ ಆರ್ಯಭಾರತಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿನಲ್ಲಿ ‘ಎಲೆಕ್ಟ್ರಾನಿಕ್ಸ್‌ ಎಂಡ್‌ ಕಮ್ಯೂನಿಕೇಷನ್‌’ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಲೇ ಜನಪರ, ಜೀವಪರ ಮೌಲ್ಯ ಬಿತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

ಸಾಮಾಜಿಕ ಸಮಸ್ಯೆ, ರಾಜಕೀಯ ವಿದ್ಯಮಾನ, ತಾಂತ್ರಿಕ ಶಿಕ್ಷಣ, ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜಿಲ್ಲೆಯಲ್ಲಿ ಪ್ರತಿನಿಧಿಸಿಸುವ ಜೊತೆಗೆ ಸಾಕಷ್ಟು ಪ್ರಶಸ್ತಿ, ಮೆಚ್ಚುಗೆ ಗಳಿಸಿದ್ದಾರೆ.

 

ತುಮಕೂರಿನ ಸ್ಮಾರ್ಟ್‌ಸಿಟಿ ಯೋಜನೆಗಾಗಿ ‘ಸ್ಮಾರ್ಟ್‌ ವೇಸ್ಟ್‌ ಇನ್‌ ಫಾರ್‌ ಸ್ಮಾರ್ಟ್‌ ಸಿಟಿ’ ಎಂಬ ಸಂಶೋಧನೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಹಾಗೂ ರಾಜ್ಯ ಸರ್ಕಾರಕ್ಕೆ ಇದರ ಕ್ರಿಯಾ ಯೋಜನೆಯನ್ನು ಕಳುಹಿಸಿದ್ದಾರೆ. ಸರ್ಕಾರ ಈ ತಂತ್ರಜ್ಞಾನಕ್ಕೆ ಅನುಮೋದನೆ ನೀಡಿದರೆ ನಗರದ ಕಸ ನಿರ್ವಹಣೆ ‘ಸ್ಮಾರ್ಟ್‌’ ಆಗಲಿದೆ ಎನ್ನುವುದು ಅವರ ವಿಶ್ವಾಸ.

 

‘ಇಂಡಿಯನ್‌ ಸೊಸೈಟಿ ಫಾರ್‌ ಟೆಕ್ನಿಕಲ್‌ ಎಜುಕೇಷನ್‌’ ಕೊಡಮಾಡುವ ಪ್ರಸಕ್ತ ವರ್ಷದ ‘ಬೆಸ್ಟ್‌ ಪಾಲಿಟೆಕ್ನಿಕ್‌ ಟೀಚರ್’ ಪ್ರಶಸ್ತಿ ಸಿಕ್ಕಿರುವುದು ಅವರ ಕಾರ್ಯಗಳಿಗೆ ಮತ್ತಷ್ಟು ಹುರುಪು ತುಂಬಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿ, ಜವಾಬ್ದಾರಿ ಮೂಡಿಸುವ ಅವರ ನಿಲುವಿಗೆ ಮತ್ತಷ್ಟು ಕಸುವು ಬಂದಿದೆ. 

 

-ಅಭಿಲಾಷ ಬಿ.ಸಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು