ಪರಶುರಾಮ ಲಮಾಣಿ

ಬ್ಯಾಡಗಿ | ಚಿತ್ರ ಕಲಾವಿದ

ಚಿತ್ರಕಲೆಯಲ್ಲಿ ಪರಶುರಾಮನ ಛಾಪು

 

ಗ್ರಾಮೀಣ ಪರಿಸರದಲ್ಲಿ ಬೆಳೆದ ಪರಶುರಾಮ ಲಮಾಣಿ ಅವರಿಗೆ ಬಾಲ್ಯದಿಂದಲೂ ಚಿತ್ರಕಲೆಯ ಬಗ್ಗೆ ಆಸಕ್ತಿಯಿತ್ತು.   ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ 30 ಮೇ 1994ರಂದು ಗಂಗವ್ವ ಶೇಖಪ್ಪ ಅವರ ಮಗನಾಗಿ ಜನಿಸಿದರು. ಗ್ರಾಮೀಣ ಹಿನ್ನೆಲೆಯ ಮನೆಯಲ್ಲಿ ಕೃಷಿ, ಕೂಲಿಯೇ ಜೀವನೋಪಾಯವಾಗಿತ್ತು.

 

ಪರಶುರಾಮ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ವಂತ ಊರಾದ ಗುಂಡೇನಹಳ್ಳಿಯಲ್ಲಿಯೇ ಮುಗಿಸಿ, ಪದವಿ ಪೂರ್ವ ಶಿಕ್ಷಣವನ್ನು ಹಾವೇರಿಯ ಎಸ್.ಜೆ.ಎಂ. ಕಾಲೇಜು ಹೊಸಮಠದಲ್ಲಿ ಕಲಾ ವಿಭಾಗದಲ್ಲಿ ಪೂರೈಸಿದರು. ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬಿ.ವಿ.ಎ. ಪದವಿ ಪಡೆದು, ಪ್ರಸ್ತುತ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ಗೊಟಗೋಡಿ, ಶಿಗ್ಗಾವಿಯಲ್ಲಿ ದೃಶ್ಯ ಕಲೆ ವಿಭಾಗದಲ್ಲಿ ಎಂ.ವಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ‌

 

ಕುಂಚದ ಹೆಜ್ಜೆಗಳು: ಬೆಂಗಳೂರು ಚಿತ್ರಸಂತೆ, ಮೈಸೂರು ಕಲಾಪ್ರದರ್ಶನ, ಶಿರಸಂಗಿ ಕಲಾ ಪ್ರದರ್ಶನ, 46ನೇ ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾ ಪ್ರದರ್ಶನ, ಬೆಂಗಳೂರಿನಲ್ಲಿ ನಡೆದ ಸಾಂಪ್ರದಾಯಿಕ ಕಲಾ ಸ್ಪರ್ಧೆ ಜಿ.ಎ.ಎಫ್.ಎಕ್ಸ್ ಹಾಗೂ ದಾವಣಗೆರೆಯ ಚಿತ್ರೋತ್ಸವ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಛಾಪು ಮೂಡಿಸಿ ದ್ದಾರೆ. ಸಮೂಹ ಕಲಾ ಪ್ರದರ್ಶನಗಳಾದ ಧಾರವಾಡದಲ್ಲಿ ಕಲಾ ಪಯಣ, ಧಾರವಾಡದ ಜಿಲ್ಲಾ ಉತ್ಸವದ ಕಲಾ ಪ್ರದರ್ಶನ ಹಾಗೂ ಮಹಾರಾಷ್ಟ್ರದ ಮೀರಜ್‌ನ ಪಿಕಾಕ್ ಆರ್ಟ್‌ ಗ್ಯಾಲರಿಯಲ್ಲಿ ‘ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಮಾಡಿ ರುವುದು ಇವರ ಹೆಗ್ಗಳಿಕೆ. 

 

- ಸಿದ್ದು ಆರ್‌.ಜಿ. ಹಳ್ಳಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು