ನಿರಂಜನ ಕಾರಗಿ

ಬೆಳಗಾವಿ | ನವೋದ್ಯಮ

ನೀರು ಶುದ್ಧೀಕರಿಸುವ ಉಪಕರಣ ಅಭಿವೃದ್ಧಿ; ₹ 30ಕ್ಕೆ ಫಿಲ್ಟರ್‌

 

ಬೆಳಗಾವಿಯ 24 ವರ್ಷ ವಯಸ್ಸಿನ ಯುವ ಎಂಜಿನಿಯರ್ ನಿರಂಜನ್ ಕಾರಗಿ, ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಮಾಡಿದ್ದ ಪ್ರಾಜೆಕ್ಟ್‌ ಅನ್ನು ಸುಧಾರಿಸಿ ‘ನವೋದ್ಯಮ’ಮಾಡಿಕೊಂಡಿದ್ದಾರೆ. ಅಗ್ಗದ ಬೆಲೆಗೆ (₹30) ದೊರೆಯುವ ‘ನೀರು ಶುದ್ಧೀಕರಿಸುವ ಉಪಕರಣ’ (ಫಿಲ್ಟರ್‌) ಅಭಿವೃದ್ಧಿಪಡಿಸಿ, ಔದ್ಯೋಗಿಕ ವಲಯದಲ್ಲಿ ‘ಫಿಲ್ಟರ್ ಮ್ಯಾನ್’ ಎಂದೇ ಖ್ಯಾತರಾಗಿದ್ದಾರೆ. 

 

ತಾವು ಚಿಕ್ಕವರಿದ್ದಾಗ, ಸರ್ಕಾರಿ ಶಾಲೆಯೊಂದರ ಮಕ್ಕಳು ಕಲುಷಿತ ನೀರು ಸೇವಿಸುತ್ತಿದ್ದುದ್ದನ್ನು ಕಂಡು ಮರುಗಿದ್ದು ಚಿತ್ತಭಿತ್ತಿಯಲ್ಲಿ ಛಾಪೊತ್ತಿತ್ತು. ದೊಡ್ಡವರಾದ ಮೇಲೆ ಸೋವಿ ದರದ ಫಿಲ್ಟರ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಬಡವರಿಗೂ ಶುದ್ಧ ನೀರು ಕೈಗೆಟಕುವ ದರದಲ್ಲಿ ಸಿಗಬೇಕು ಎನ್ನುವುದು ಅವರ ಉದ್ದೇಶ. ಇದಕ್ಕಾಗಿ ಕಿರು ಬೆರಳಿನ ಗಾತ್ರದ ಸಾಧನ ಕಂಡುಹಿಡಿದಿದ್ದಾರೆ. ಅದನ್ನು ಬಾಟಲಿಯ ಬಾಯಿಗೆ ಅಳವಡಿಸಿ, ನೀರು ಶುದ್ಧೀಕರಿಸಬಹುದು. ಫಿಲ್ಟರ್‌ ಅನ್ನು 100 ಲೀಟರ್‌ ನೀರು ಶುದ್ಧೀಕರಿಸಬಹುದಾಗಿದೆ. ನೀರು ಸೇವನೆಗೆ ಯೋಗ್ಯವಾಗುತ್ತದೆ ಎನ್ನುತ್ತಾರೆ ಅವರು.  ಮತ್ತಷ್ಟು ಸುಧಾರಿತ ವಾಟರ್‌ ಫಿಲ್ಟರ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

 

ಎರಡು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚಿನ ಸಾಧನ ಮಾರಿದ್ದಾರೆ. ಭಾರತೀಯ ಸೇನೆ, ಸಿಆರ್‌ಪಿಎಫ್‌ಗೂ ಫಿಲ್ಟರ್‌ಗಳನ್ನು ಪೂರೈಸಿದ್ದಾರೆ. ವಿವಿಧ 15 ದೇಶಗಳಿಗೆ ಸಾಧನ ರಫ್ತು ಮಾಡಿದ್ದಾರೆ. 8 ಮಂದಿಗೆ ಕೆಲಸ ಕೊಟ್ಟಿದ್ದಾರೆ.  

 

ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ್ದಾರೆ. ಬೆಳಗಾವಿಯ ಹೆಸರನ್ನೂ ಬೆಳಗಿಸಿದ್ದಾರೆ.

 

- ಎಂ.ಮಹೇಶ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು