ನಾಗಶ್ರೀ

ಬೆಂಗಳೂರು | ಯಕ್ಷಗಾನ ಕಲಾವಿದೆ

ಯಕ್ಷಗಾನಕ್ಕೂ ಸೈ, ಧಾರಾವಾಹಿ - ಸಿನೆಮಾ ನಟನೆಗೂ ಸೈ

 

 

‘ನಾಗಶ್ರೀ’ ಎಂದ ಕೂಡಲೇ ನೆನ‍ಪಾಗುವುದು ಯಕ್ಷಗಾನ ಗಾನ ಕೋಗಿಲೆ ಕಾಳಿಂಗ ನಾವಡರ ಯಕ್ಷ ಪ್ರಸಂಗ. ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಈ ಪ್ರಸಂಗದಲ್ಲಿ ‘ನಾಗಶ್ರೀ’ಯಾಗಿ ಹತ್ತಾರು ಬಾರಿ ಕುಣಿದಿರುವ ಈಕೆಯ ಹೆಸರು ಸಹ ‘ನಾಗಶ್ರೀ’. ಯಕ್ಷಗಾನ ಹಿನ್ನೆಲೆಯ ಕುಟುಂಬದಿಂದ ಬಂದಿರುವ ನಾಗಶ್ರೀ ಈಗ ಬಡಗುತಿಟ್ಟಿನಲ್ಲಿ ಬಹುಬೇಡಿಕೆಯ ಕಲಾವಿದೆ.

 

ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಚಿಟ್ಟಾಣಿ ಅವರ ಭಸ್ಮಾಸುರ ಪಾತ್ರಕ್ಕೆ ಸಂವಾದಿಯಾಗಿ ಮೋಹಿನಿ ಪಾತ್ರದಲ್ಲಿ ಹಾಗೂ ರಂಗದ ರಾಜ ಕೃಷ್ಣಯಾಜಿ ಬಳ್ಕೂರು ಅವರ ಭೀಷ್ಮನ ಪಾತ್ರಕ್ಕೆ ಅಂಬೆಯಾಗಿ ಅಭಿನಯಿಸಿ ಸೈ ಅನಿಸಿಕೊಂಡ ದಿಟ್ಟೆ. ಬೆಂಗಳೂರಿನಲ್ಲಿ ನೆಲೆಸಿರುವ ಅವರು, ಈವರೆಗೆ ನೂರಾರು ಪ್ರಸಂಗಗಳಲ್ಲಿ ಅತಿಥಿ ಕಲಾವಿದೆಯಾಗಿ ವೇಷ ಮಾಡಿದ್ದಾರೆ. ಕೃಷ್ಣ, ಕುಶ, ಲವ, ಸುಧನ್ವ, ಅರ್ಜುನ, ಅಭಿಮನ್ಯು, ಅಂಬೆ, ಮೋಹಿನಿ, ಪ್ರಭಾವತಿ, ಚಿತ್ರಾಕ್ಷಿ, ಸತ್ಯಭಾಮಾ, ಲಕ್ಷ್ಮಿ ಅವರ ಪ್ರಮುಖ ಪಾತ್ರಗಳು.

ಕನ್ನಡದ 23 ಹಾಗೂ ತಮಿಳಿನ ಎರಡು ಧಾರಾವಾಹಿಗಳಲ್ಲಿ, ಕನ್ನಡದ ಎರಡು ಸಿನೆಮಾದಲ್ಲಿ ನಟಿಸಿದ್ದಾರೆ.

 

- ಮಂಜುನಾಥ್ ಹೆಬ್ಬಾರ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು