ಮುನೀರ್ ಬಾಷಾ

ಶಿವಮೊಗ್ಗ | ಖೋ ಖೋ ರಾಷ್ಟ್ರೀಯ ಆಟಗಾರ

ಖೋ ಖೋನಲ್ಲಿ ಭಾರತವನ್ನು ಪ್ರತಿನಿಧಿಸುವ ಬಾಷಾಗೆ ಪೋಷಕರ ಪ್ರೀತಿಯೇ ಸ್ಪೂರ್ತಿ

 

‘ತಂದೆ–ತಾಯಿ ಸಹಕಾರ ಹಾಗೂ ಬೆಂಬಲದಿಂದಲೇ ನಾನು ರಾಷ್ಟ್ರಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದೇನೆ’ ಎಂದು ತಮ್ಮ ಮನದಾಳ ತೆರೆದಿಡುತ್ತಾರೆ ರಾಷ್ಟ್ರೀಯ ಖೋ ಖೋ ಆಟಗಾರ ಬಿ.ಮುನೀರ್ ಬಾಷಾ.


ತಂದೆ ಅಹಮದ್ ಖಾನ್ ವೃತ್ತಿಯಲ್ಲಿ ಎಪಿಎಂಸಿ ಹಮಾಲಿ. ತಾಯಿ ಅರೀಫಾ ಬೇಗಂ. ಇಬ್ಬರ ಶ್ರಮವೇ ಮುನೀರ್ ಸಾಧನೆಗೆ ಸ್ಫೂರ್ತಿ. ಒಬ್ಬ ಅಣ್ಣ, ತಮ್ಮ ಹಾಗೂ ತಂಗಿ ಇದ್ದು, ಅವರೂ ಸಹಕಾರ ನೀಡುತ್ತಾ ಬಂದಿದ್ದಾರೆ. ‘ಸಾಧನೆಯ ಖುಷಿ ಒಂಧು ಕಡೆ, ಜವಾಬ್ದಾರಿಯ ನೊಗ ಇನ್ನೊಂದು ಕಡೆ’ ಎನ್ನುವಾಗ ಬಾಷಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ.


ಹೈಸ್ಕೂಲ್ ಹಂತದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ಕೊಕ್ಕೊ ಆಟದಲ್ಲಿ ಮನಸ್ಸು ನೆಡುವಂತೆ ಮಾಡಿದ್ದು ಸರ್‌ ಎಂವಿ ಸ್ಪೋರ್ಟ್ಸ್‌ ಕ್ಲಬ್. ‘ಅಲ್ಲಿ ನನ್ನ ಗುರುಗಳಾದ ಶ್ರೀನಿವಾಸ್, ಪ್ರದೀಪ್, ವಿನೋದ್ ಜತೆಗೆ ನನ್ನ ಕಾಲೇಜು ಗುರುಗಳಾದ ವಿಶ್ವನಾಥ್ ಅವರ ಪ್ರೋತ್ಸಾಹ, ಹಾರೈಕೆ ದೊರಕಿತು. ಸಹಜವಾಗಿ ಖೋ ಖೋದಲ್ಲಿನ ಗೀಳು ಹೆಚ್ಚು ಮಾಡಿತು. ಅದು ನನ್ನ ಓದಿನ ಭಾಗವಾಗಿ ಬೆಳೆಯುತ್ತಾ ಸಾಗಿತು. ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿನ ಹೆಸರು ಮಾಡುವಂತೆ ಮಾಡಿತು. ಇವರೆಲ್ಲರ ಹಾರೈಕೆಯಿಂದ ಭಾರತ ತಂಡವನ್ನು ಪ್ರತಿನಿಧಿಸಿ ಪದಕ ತರುವ ಅವಕಾಶವನ್ನು ನನ್ನದಾಯಿತು’ ಎನ್ನುವ ಮುನೀರ್ ಮಾತಿನಲ್ಲಿ ಮತ್ತಷ್ಟು ಸಾಧನೆಯ ಶಿಖರ ಏರುವ ತವಕ ಇದೆ.
 

- ಶ್ರೀಹರ್ಷ, ಭ್ರದ್ರಾವತಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು