ಕುಶಾಲ್‌ ಆರಾಧ್ಯ ಆರ್‌.

ಮೈಸೂರು | ಆಹಾರೋದ್ಯಮ

ಕುಶಾಲ್‌ ಕೈ ಹಿಡಿದ ಆಹಾರೋದ್ಯಮ

 

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 1991ರ ಮಾರ್ಚ್‌ 24ರಂದು ಜನಿಸಿರುವ ಕುಶಾಲ್‌ ಆರಾಧ್ಯ ಆರ್‌. ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ. ಇವರು ಮೂಲತಃ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆದರೂ ಚಿಕ್ಕ ವಯಸ್ಸಿನಲ್ಲೇ ಆಹಾರ ಉದ್ದಿಮೆಯನ್ನು ಸ್ಥಾಪಿಸಿ ಸೈ ಅನ್ನಿಸಿಕೊಂಡಿದ್ದಾರೆ. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ತರಬೇತಿ ಪಡೆದು ಗುಜರಾತ್‌ನಲ್ಲಿ ಆಹಾರ ಕಾರ್ಖಾನೆಯನ್ನು ಸ್ಥಾಪಿಸಿ ಅನೇಕ ಯುವಕರಿಗೆ ಉದ್ಯೋಗ ನೀಡಿದ್ದಾರೆ.

 

ಎಂಜಿನಿಯರಿಂಗ್‌ ಪದವೀಧರರಾದ ಕುಶಾಲ್‌ 2014ರಲ್ಲಿ ಚಿಕ್ಕದಾಗಿ ಆಹಾರ ಉದ್ಯಮವನ್ನು ಶುರು ಮಾಡಿದರು. 2015ರಲ್ಲಿ ಕೇಂದ್ರ ಸರ್ಕಾರದ ಐ–ಕ್ರಿಯೇಟ್‌ ಫೆಲೋಶಿಪ್‌ಗೆ ಆಯ್ಕೆಯಾಗಿ ಉದ್ಯಮ ತರಬೇತಿ ಪಡೆದರು. 2016ರಲ್ಲಿ ಗುಜರಾತ್‌ನಲ್ಲಿ ‘ನಾಕ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್’ ಶುರು ಮಾಡಿದರು.

 

ದೇಶ, ವಿದೇಶಗಳಲ್ಲಿ ಆಹಾರ ಉದ್ಯಮಗಳನ್ನು ಅಧ್ಯಯನ ಮಾಡಿ ಸಕಾರಾತ್ಮಕ ಅಂಶಗಳನ್ನು ತಮ್ಮ ಉದ್ಯಮಕ್ಕೆ ಅಳವಡಿಸಿಕೊಂಡು 2017ರಲ್ಲಿ ಆಹಾರ ಉತ್ಪಾದನೆ ಶುರು ಮಾಡಿದರು. ಔಷಧೀಯ ಗುಣವಿರುವ ‘ಸ್ಪಿರುಲಿನಾ’ ಗಿಡಮೂಲಿಕೆಯನ್ನು ಬಳಸಿಕೊಂಡು ಆಹಾರ ಬಿಲ್ಲೆಗಳನ್ನು ಉತ್ಪಾದಿಸುತ್ತಿದ್ದಾರೆ.


‘ವೆಜ್‌ ಚಿಕನ್’ ತಯಾರಿಗೆ ಸಿದ್ಧತೆ: ಭಾರತದಲ್ಲೇ ಮೊದಲ ಬಾರಿಗೆ ಸಂಪೂರ್ಣ ಸಸ್ಯ ಮೂಲ ಬಳಸಿಕೊಂಡು ಕೋಳಿ ಮಾಂಸ ತಯಾರಿಸಲು ಇವರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ವಿದೇಶಗಳಲ್ಲಿ ಅಧ್ಯಯನ ನಡೆಸಿ, ತಮ್ಮ ಕಾರ್ಖಾನೆಯಲ್ಲಿ ಪ್ರಯೋಗಿಸಲು ಶುರು ಮಾಡಿದ್ದಾರೆ. ನೋಡಲು ಕೋಳಿ ಮಾಂಸದಂತೆಯೇ ಇರುವುದು, ರುಚಿ ಸಹ ಸಹಜವಾಗಿ ಮಾಂಸದಂತೆಯೇ ಇರುವುದು ವಿಶೇಷ.

 

- ನೇಸರ ಕಾಡನಕು‍ಪ್ಪೆ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು