ಕರಬಸಪ್ಪ ಗೊಂದಿ

ಹಾನಗಲ್‌ | ಪೊಲೀಸ್ ಕಾನ್‌ಸ್ಟೆಬಲ್‌

'ರಕ್ತದಾನ ಕರ್ಣ' ಈ ಪೊಲೀಸಪ್ಪ

 

ಅಕ್ಕಿಆಲೂರಿನ ಪೊಲೀಸ್ ಕಾನ್‌ಸ್ಟೆಬಲ್‌ ಆಗಿರುವ ಇಲ್ಲಿನ ಕರಬಸಪ್ಪ ಗೊಂದಿ ವೃತ್ತಿಯ ಜತೆ ರಕ್ತದಾನ, ನೇತ್ರದಾನ, ಪರಿಸರ ಕಾಳಜಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

 

31 ವರ್ಷದ ಕರಬಸಪ್ಪ ಇದುವರೆಗೆ 24 ಬಾರಿ ರಕ್ತದಾನ ಮಾಡಿದ್ದಾರೆ. 4 ಸಾವಿರಕ್ಕೂ ಅಧಿಕ ಜನರ ರಕ್ತದ ಗುಂಪು, ಅವರ ಸಂಪರ್ಕ ಸಂಖ್ಯೆಯ ಮಾಹಿತಿ ಸಂಗ್ರಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲಿ ರಕ್ತದಾನ ಮಾಡುವಂತೆ ಇತರರನ್ನೂ ಪ್ರೇರೇಪಿಸುತ್ತಿದ್ದಾರೆ. ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಸಹಕಾರದೊಂದಿಗೆ ಈ ತನಕ 28 ನೇತ್ರ ತಪಾಸಣೆ ಶಿಬಿರ ನಡೆಸಿದ್ದು, 1,350 ಜನರಿಗೆ ಉಚಿತವಾಗಿ ಪೊರೆ ಚಿಕಿತ್ಸೆ ಮಾಡಿಸಿದ್ದಾರೆ. 26 ಜನರಿಂದ ಮರಣಾನಂತರ ನೇತ್ರದಾನ ಮಾಡಿಸಿದ್ದಾರೆ.

 

ಸಾರಿಗೆ ಸಂಸ್ಥೆಯ ಬಸ್ಸನ್ನು ವಾಯುವ್ಯ ವಾಹಿನಿ ರಕ್ತದಾನ ರಥವನ್ನಾಗಿ ನಿರ್ಮಿಸಿ ರಕ್ತದಾನದ ಬಗೆಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತಾವೂ ಸೇರಿದಂತೆ ತಮ್ಮ ಕುಟುಂಬದ 5 ಜನ ನೇತ್ರದಾನ, ದೇಹದಾನ ಮತ್ತು ಚರ್ಮದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

 

ಕರುನಾಡ ನಕ್ಷತ್ರ, ಸಮಾಜ ಸೇವಾ ರತ್ನ, ನೇತ್ರದಾನ ರಾಯಭಾರಿ, ಅವಾರ್ಡ್ ಆಫ್ ಆನರ್ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರ ಇವರಿಗೆ ಸಂದಿವೆ. ಇನ್ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ 2 ರಾಷ್ಟ್ರೀಯ ದಾಖಲೆ, 2 ವಿಶ್ವ ದಾಖಲೆ ಇವರ ಹೆಸರಿನಲ್ಲಿವೆ.

 

- ಸಿದ್ದು ಆರ್‌.ಜಿ. ಹಳ್ಳಿ
 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು