ಜ್ಯೋತಿ ಬೀಳಗಿ

ತೇರದಾಳ | ಶಿಕ್ಷಕಿ

ಬದುಕಿಗೆ ನೆರವಾದ ಆನ್ಲೈನ್ ಪಾಠ

 

ತೇರದಾಳ ಪಟ್ಟಣದ ಶಿಕ್ಷಕಿ ಜ್ಯೋತಿ ಮಲ್ಲಪ್ಪ ಬೀಳಗಿ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಪಾಠ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. 

 

ಜ್ಯೋತಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ, ಡಿ.ಇಡಿ, ಬಿ.ಇಡಿ ಹಾಗೂ ಎಂ.ಎ ಕಲಿತಿದ್ದಾರೆ. ಮೊದಲು ಕೆಲ ಕಾಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಬೆನ್ನುಮೂಳೆ ತೊಂದರೆ ಕಾರಣದಿಂದ ಹೆಚ್ಚು ಹೊತ್ತು ನಿಲ್ಲುವಂತಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದರು.

 

ನೌಕರಿ.ಕಾಮ್‌ನಲ್ಲಿ ಜ್ಯೋತಿ ಬಯೊಡೆಟಾ ನೋಡಿದ್ದ ಹೈದರಾಬಾದ್‌ನ ಟೀಚಿಂಗ್ ಸ್ಟಾಮರ್ ಕಂಪೆನಿ ಸಂದರ್ಶನದ ಮೂಲಕ ಆಯ್ಕೆ ಮಾಡಿತ್ತು. ಆನ್‌ಲೈನ್‌ ಮೂಲಕವೇ ತರಬೇತಿ ಪಡೆದು ಒಪ್ಪಂದ ಮಾಡಿಕೊಂಡ ಜ್ಯೋತಿ, ಕೆಲಸ ಆರಂಭಿಸಿದರು. ಈಗ ಮನೆಯಲ್ಲೆ ಕುಳಿತು ₹35 ಸಾವಿರಕ್ಕೂ ಅಧಿಕ ವೇತನ ಪಡೆಯುತ್ತಿದ್ದಾರೆ.

 

ಏನಿದು ಆನ್ಲೈನ್ ಪಾಠ?

ಅಮೆರಿಕ, ಸೌದಿ ಅರೇಬಿಯಾ, ರಷ್ಯಾ ಹಾಗೂ ಜರ್ಮನಿ ದೇಶಗಳ ಮಕ್ಕಳಿಗೆ ಪಾಠ ಮಾಡುತ್ತಾರೆ. ಟೀಚಿಂಗ್ ಸ್ಟೋಮರ್‌ನ ವೆಬ್‌ಸೈಟ್‌ನಲ್ಲಿ ಲಾಗಿನ್ ಆದರೆ ಅಲ್ಲೊಂದು ಸ್ಟಾಫ್ ರೂಂ ತೆರೆದುಕೊಳ್ಳುತ್ತದೆ. ಅಲ್ಲಿ ಮಾಹಿತಿ ತುಂಬಿದಾಗ, ವರ್ಗ ಕೋಣೆ ತೆರೆದುಕೊಳ್ಳುತ್ತದೆ. ಅಲ್ಲಿ ಪಾಠ ಮಾಡಬೇಕು. ಬೆಳಗಿನ ಜಾವ 4.30ರಿಂದ 8.30ರವರೆಗೆ ಪಾಠ.

 

- ವೆಂಕಟೇಶ ಜಿ.ಎಚ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು