ಡಾ.ಹರೀಶ್‌ ಹೆಗಡೆ

ವಿಜಯಪುರ | ಹಿಂದೂಸ್ತಾನಿ ಗಾಯಕ

ಹಿಂದೂಸ್ತಾನಿ ಸಂಗೀತವೇ ಓದು, ಬರಹ, ಬದುಕು ಮತ್ತು ಸಾಧನೆ

 

 

ಮೂಲತಃ ಉತ್ತರ ಕನ್ನಡಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾಲವಳ್ಳಿಯವರು. 1985ರ ಏ.26ರಂದು ಜನನ. ಅಪ್ಪ ಸುಬ್ರಾಯ ಹೆಗಡೆ ಕೃಷಿಕರು. ಅಮ್ಮ ಸಾವಿತ್ರಿ ಹೆಗಡೆ, ಬಾಲ್ಯದಲ್ಲಿಯೇ ಮಾತೃವಿಯೋಗ. ಅಪ್ಪನೇ ಸರ್ವಸ್ವ.  

 

ಸಂಗೀತದಲ್ಲಿ, ನೆಟ್, ಪಿಎಚ್.ಡಿ ಪದವಿ ಪಡೆದುಕೊಂಡಿದ್ದು, ಸದ್ಯ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರದರ್ಶಕ ಕಲೆಗಳ ಕೇಂದ್ರದಲ್ಲಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಾಗಿದ್ದಾರೆ.

 

ಮುಂಬೈ, ಬರೋಡ, ಸಾಂಗ್ಲಿ, ಛತ್ತೀಸ್‌ಗಢ, ಮೈಸೂರು, ಚೆನ್ನೈನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಸುಗಮ, ಶಾಸ್ತ್ರೀಯ ಸಂಗೀತ ಮತ್ತು ರಾಗ ಸಂಯೋಜನೆಯಲ್ಲಿ ಆಕಾಶವಾಣಿಯ ‘ಬಿ’ ಗ್ರೇಡ್‌ ಕಲಾವಿದರಾಗಿದ್ದಾರೆ.

 

‘ಸ್ವರಾಲಂಕೃತಿ’ (ಕನ್ನಡ ಮತ್ತು ಇಂಗ್ಲಿಷ್), ‘ಗಾನಕೋಗಿಲೆ’ (ಡಾ.ನಂದಾ ಎಂ.ಪಾಟೀಲ ಅವರ ಜೀವನ ಚರಿತ್ರೆ) ಹಾಗೂ ‘ರಾಗಗಳ ಪ್ರಸ್ತುತೀಕರಣದಲ್ಲಿ ಶಾಙ್ರ್ಗದೇವನ ಸಂಗೀತ; ರತ್ನಾಕರದ ಪ್ರಕೀರ್ಣಕಾಧ್ಯಾಯದ ಪಾತ್ರ’ ಸಂಶೋಧನಾ ಪ್ರಬಂಧ ಸೇರಿದಂತೆ ಮೂರು ಕೃತಿಗಳನ್ನು ರಚಿಸಿದ್ದಾರೆ. ಒಂಬತ್ತು ಲೇಖನಗಳು ಪ್ರಕಟವಾಗಿವೆ.

 

ವಿಜಯಪುರದಲ್ಲಿ 132 ಗೃಹಸಂಗೀತ ಹಾಗೂ 15ಕ್ಕೂ ಹೆಚ್ಚು ಉಚಿತ ಸಂಗೀತ ಶಿಬಿರಗಳನ್ನು,  ‘ಶತಕಂಠ ಗಾಯನ’ ಮತ್ತು ‘ಸಹಸ್ರ ಕಂಠ’ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

 

‘ಗುರುಕುಲ ಚಕ್ರವರ್ತಿ’, ‘ಸಂವಹನ ಸಂಪನ್ನ’, ‘ಬಸವಶಾಂತಿ’, ಪುಣೆಯ ‘ತ್ರಯಂಬಕ್ ಜಾನೋರಿಕಾರ್ ಶಾಸ್ತ್ರೀಯ ಗಾಯನ ಪುರಸ್ಕಾರ’, ಬರೋಡದ ‘ಉದಯನ್ ಇಂದುಭಾಯಿ’ ಹಾಗೂ ‘ಮಹಾದೇವ’ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

- ಸುಭಾಸ ಎಸ್. ಮಂಗಳೂರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು