ದಿವ್ಯಾ ಜ್ಯೋತಿ ಫ್ರಾನ್ಸಿಸ್‌

ಹುಬ್ಬಳ್ಳಿ | ಪವರ್‌ ಲಿಫ್ಟಿಂಗ್‌ ಚಾಂಪಿಯನ್‌

ಪವರ್‌ ಲಿಫ್ಟಿಂಗ್‌ನ 'ಲೇಡಿ ಡಾನ್‌'

 

ಸಾಕಷ್ಟು ದೈಹಿಕ ಸಾಮರ್ಥ್ಯ ಬೇಕಾಗುವ ಪವರ್‌ ಲಿಫ್ಟಿಂಗ್‌ ಕ್ರೀಡೆಯಲ್ಲಿ ಸಾಧನೆಯ ಹಾದಿ ಕಂಡುಕೊಂಡವರು ಹುಬ್ಬಳ್ಳಿಯ ದಿವ್ಯಾ ಜ್ಯೋತಿ ಫ್ರಾನ್ಸಿಸ್‌.

 

ದಿವ್ಯಾ ಜ್ಯೋತಿ ಅವರ ತಂದೆ ಫ್ರಾನ್ಸಿಸ್‌ ದೇಹದಾರ್ಢ್ಯ ಪಟುವಾಗಿದ್ದರು. ಕ್ರೀಡೆಯತ್ತ ಆಸಕ್ತಿ ಬೆಳೆದಿದ್ದು ಅಪ್ಪನಿಂದಲೇ. ಪವರ್ ಲಿಫ್ಟಿಂಗ್‌ನಲ್ಲಿ 2018ರಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಜೂನಿಯರ್‌ ವಿಭಾಗದ 43 ಕೆ.ಜಿ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 247.5 ಕೆ.ಜಿ ಭಾರ ಎತ್ತಿ, ಬೆಳ್ಳಿ ಪದಕವನ್ನು ಚುಂಬಿಸಿದ್ದರು.

 

2018ರಲ್ಲಿ ತಮಿಳುನಾಡಿನಲ್ಲಿ ನಡೆದ ಜೂನಿಯರ್‌ ನ್ಯಾಷನಲ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಫೆಬ್ರುವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜರುಗಿದ್ದ ಫೆಡರೇಷನ್‌ ಕಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅದೇ ವರ್ಷ ಹುಬ್ಬಳ್ಳಿಯಲ್ಲಿ ನಡೆದಿದ್ದ ರಾಜ್ಯಮಟ್ಟದ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿಯೂ ಚಿನ್ನ ಜಯಿಸಿದ್ದರು.

 

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕುಂದಾಪುರದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ದಿವ್ಯಾ ಒಟ್ಟು 260 ಕೆ.ಜಿ. ಭಾರ ಎತ್ತಿ ಚಿನ್ನದ ಪದಕ ಗೆದ್ದರು.

 

ರಾಜ್ಯ ಮಟ್ಟದ ಟೂರ್ನಿಯಲ್ಲಿ ದಿವ್ಯಾ ಮೂರು ಚಿನ್ನದ ಪದಕ ಜಯಿಸಿದ್ದಾರೆ. ಕಳೆದ ವರ್ಷ ಕೊಯಮತ್ತೂರಿನಲ್ಲಿ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿಯೂ ಚಿನ್ನ ಗೆದ್ದಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.
 

–ಪ್ರಮೋದ್‌ ಜಿ.ಕೆ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು