ಧನುಷ್‌ ರೈ

ಮಂಗಳೂರು | ಮೆರೈನ್‌ ಎಂಜಿನಿಯರ್‌

ಕಡಲ ಸಾಧಕ; ರಾಷ್ಟ್ರೀಯ ಲೈಫ್‌ ಸೇವಿಂಗ್‌ ಸ್ಪೋರ್ಟ್ಸ್‌ನಲ್ಲಿ ಚಾಂಪಿಯನ್‌

 

ರಾಷ್ಟ್ರೀಯ ಲೈಫ್‌ ಸೇವಿಂಗ್‌ ಸ್ಪೋರ್ಟ್ಸ್‌ನಲ್ಲಿ ಚಾಂಪಿಯನ್‌ ಆಗಿರುವ ಧನುಷ್‌ ರೈ ಇನ್ನೂ 23ರ ಯುವಕ,  ಮೆರೈನ್‌ ಎಂಜಿನಿಯರ್‌ ಪದವೀಧರ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮುಕ್ರಂಪಾಡಿಯವರು. ಹಡಗಿನಲ್ಲಿ ನೌಕರಿ ಪಡೆಯುವ ತವಕದಲ್ಲಿದ್ದಾರೆ. ಅದರೊಂದಿಗೆ ತಮ್ಮ ಸಾಧನೆಯ ಕ್ಷೇತ್ರದ ಕನಸುಗಳನ್ನೂ ನನಸಾಗಿಸಲು ಸಜ್ಜಾಗಿದ್ದಾರೆ.

 

ಧನುಷ್‌ ಜಯರಾಮ ರೈ ನುಳಿಯಾಲು ಮತ್ತು ಕವಯತ್ರಿ ಮಲ್ಲಿಕಾ ಜೆ. ರೈ ಗುಂಡ್ಯಡ್ಕ ದಂಪತಿಯ ಪುತ್ರ. ‘ಒಂದು ನೌಕರಿ, ಒಬ್ಬರು ಪ್ರಾಯೋಜಕರು ಸಿಕ್ಕರೆ ಲೈಫ್‌ ಸೇವಿಂಗ್‌ ಸ್ಪೋರ್ಟ್ಸ್‌ನಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ಇದರ ರೇಸ್‌ ಪ್ರಾಕ್ಟೀಸ್‌ ಸೈಕಲ್‌ಗೇ ₹15 ಲಕ್ಷ ಬೆಲೆ ಇದೆ. ಇದರೊಂದಿಗೆ ಓಪನ್‌ ವಾಟರ್‌ ಸ್ಕೂಬಾ (18 ಮೀ ಡೀಪ್‌)  ಸರ್ಟಿಫಿಕೇಟ್‌ ಹೊಂದಿರುವ ಇವರು ಅಡ್ವಾನ್ಸ್‌ಡ್‌ ಸ್ಕೂಬಾ ಡೈವಿಂಗ್‌ ಸರ್ಟಿಫಿಕೆಟ್‌, ಎಕ್ಸ್‌ಪರ್ಟ್‌ ಇನ್‌ ಸ್ಕೂಬಾ ಡೈವಿಂಗ್‌ ಆಗಿ ತರಬೇತುದಾರನಾಗುವುದು. ಮಹತ್ವಾಕಾಂಕ್ಷೆಯ ‘ಫುಲ್‌ ಐರನ್‌ ಮ್ಯಾನ್‌’ ಟೈಟಲ್‌ ಪಡೆಯಲು ದೇಹ ದಂಡಿಸುತ್ತಿದ್ದಾರೆ.

 

ದಿಯೂನಲ್ಲಿ ನಡೆದ ರಾಷ್ಟ್ರೀಯ ಲೈಫ್‌ ಸೇವಿಂಗ್‌ ಸ್ಪೋರ್ಟ್ಸ್‌ ಚಾಂಪಿಯನ್‌ ಷಿಪ್‌–2019 ಇದರಲ್ಲಿ 2 ಚಿನ್ನ, 5 ಬೆಳ್ಳಿ ಪದಕ, 4x50m ಅಬ್ಸೆಕಲ್‌ ಸ್ವಿಮ್‌ , ಬೀಚ್‌ ಫ್ಲಾಗ್‌, ಬೀಚ್‌ ರನ್‌‌ ಇತ್ಯಾದಿಗಳಲ್ಲಿ 2 ಬೆಳ್ಳಿ ಪದಕ ಪಡೆದಿದ್ದಾರೆ. 90m Beach sprint, Beach relay ಗಳಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ.

 

ಧನುಷ್‌ ರೈ ಅವರು ಈಗ ಪುತ್ತೂರಿನ ಬಾಲವನ ಈಜುಕೊಳದಲ್ಲಿ ತರಬೇತಿದಾರ, ವಾರಣಾಸಿ ಫಾರ್ಮ್‌ ಬ್ಲೂಮಿನ್‌ ಗ್ರೀನ್‌ನಲ್ಲಿ ತರಬೇತಿದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

- ವಿಷ್ಣು ಭಾರದ್ವಾಜ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು