ಅಸ್ಫಿಯಾ ಬೇಗಂ

ಬೆಂಗಳೂರು | ಪರಿಸರ ವಿಜ್ಞಾನಿ

ಸಿಹಿ ನೀರಿನ ರಕ್ಷಣೆಗೆ ಟೊಂಕ ತೊಟ್ಟು ನಿಂತವರು

 

 

ಶುದ್ಧ ಕುಡಿಯುವ ನೀರು ಒದಗಿಸುವುದು ಎಲ್ಲ ಸರ್ಕಾರಗಳಿಗೂ ಆದ್ಯತೆಯ ಕೆಲಸವಾಗಿದೆ. ವಿಶೇಷವಾಗಿ ಕಡಲ ತೀರದಲ್ಲಿ ಸಮುದ್ರದ ಉಪ್ಪು ನೀರು ಸಿಹಿ ನೀರಿನೊಂದಿಗೆ ಬೆರೆಯುತ್ತಿರುವುದರಿಂದ ಆಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ನದಿಗಳು, ತೊರೆಗಳು, ಬಾವಿ ನೀರು ಲವಣಯುಕ್ತವಾಗಿವೆ. ನದಿಗಳಿಗೆ ಸಮುದ್ರದ ಉಪ್ಪು ನೀರು ಬೆರೆತು ಲವಣಯುಕ್ತವಾಗುವುದನ್ನು ತಡೆಯಲು ನದಿ ತಟದ ಶುದ್ಧೀಕರಣ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ನದಿ ತಟದ ಬಳಿಕ ಬಾವಿಗಳನ್ನು ತೋಡಿ ಸಮುದ್ರ ನೀರು ನೇರವಾಗಿ ನದಿ ಅಥವಾ ತೊರೆಗೆ ಸೇರುವುದನ್ನು ತಡೆಯಲಾಗುತ್ತದೆ.

 

ಅಸ್ಫಿಯಾ ಬೇಗಂ (33) ಈ ತಂಡದ ಸದಸ್ಯರು. ಕರಾವಳಿ ವಲಯ ನಿರ್ವಹಣೆಯ ಅಧ್ಯಯನ ಮತ್ತು ಕಾಸರಗೋಡು ಭಾಗದಲ್ಲಿ ಎಂಡೋಸಲ್ಫಾನ್‌ ದುಷ್ಪರಿಣಾಮ ತಗ್ಗಿಸುವಲ್ಲಿ ಅಧ್ಯಯನ ನಡೆಸಿದ್ದಾರೆ. ದಿ ಎನರ್ಜಿ ಅಂಡ್‌ ರಿಸೋರ್ಸ್‌ ಇನ್ಸ್‌ಟಿಟ್ಯೂಟ್‌(ಟೆರಿ) ನಲ್ಲಿ ಪರಿಸರ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತ ಬೆಂಗಳೂರಿನವರೇ ಆದ ಅಸ್ಫಿಯಾ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲೂ ಸ್ವಲ್ಪ ಕಾಲ ಕೆಲಸ ಮಾಡಿದ್ದಾರೆ. ಈವರೆಗೆ ಒಟ್ಟು ಎಂಟು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ತಡೆ ಇವರ ಆದ್ಯತಾ ಕ್ಷೇತ್ರವಾಗಿದೆ. ಈ ಕುರಿತೂ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ.

 

–ರವಿಪ್ರಕಾಶ್ ಎಸ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು